ಬೆಂಗಳೂರು,ಅ,9,2018(www.justkannada.in): ನವೆಂಬರ್ 3ರಂದು ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿದೆ.
ತುಮಕೂರು ಮೂಲದ ರಮೇಶ್ ನಾಯ್ಕ ಎಂಬುವವರು ಈ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ. ನವೆಂಬರ್ 3 ರಂದು ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಸಮೀಪವಿದ್ದು ಹೀಗಾಗಿ ಇಂದು ಮೂರು ಕ್ಷೇತ್ರಗಳ ಲೋಕಸಭೆ ಉಪಚುನಾವಣೆಗೆ ಆಕ್ಷೇಪ ವ್ಯಕ್ತವಾಗಿದೆ.
ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿರುವ ರಮೇಶ್ ನಾಯ್ಕ ಅವರು, ಉಪಚುನಾವಣೆಯಿಂದ ಹೊಸ ಸಂಸದರಿಗೆ ಕೇವಲ 6ತಿಂಗಳು ಮಾತ್ರ ಅವಕಾಶ ಸಿಗಲಿದೆ. ಇದಿರಂದ ಸುಮ್ಮನೆ ಜನಸಾಮಾನ್ಯರ ತೆರಿಗೆಯ ಹಣ ಪೋಲಾಗುತ್ತದೆ ಅದ್ದರಿಂದ ಲೋಕಸಭಾ ಉಪಚುನಾವಣೆಯನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದ್ದಾರೆ.
key words: Submission – PIL -High Court- Lok Sabha by-election- Cancel
The post ಲೋಕಸಭಾ ಉಪಚುನಾವಣೆ ರದ್ದು ಕೋರಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ…. appeared first on Just Kannada - Online Kannada News.