Quantcast
Channel: Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
Viewing all articles
Browse latest Browse all 41702

ಮೈಸೂರು ದಸರಾ: ನಾಳೆಯಿಂದ ಚಲನಚಿತ್ರೋತ್ಸವ: ಆಹಾರ ಮೇಳ ಉದ್ಘಾಟನೆ…

$
0
0

ಮೈಸೂರು,ಅ,9,2018(www.justikannada.in):  ಮೈಸೂರು ದಸರಾ ಹಬ್ಬದ ಒಂದು ಪ್ರಮುಖ ಕಾರ್ಯಕ್ರಮವಾದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಬುಧವಾರ ಬೆಳ್ಳಿಗೆ 10.30ಕ್ಕೆ ಕಲಾಮಂದಿರದಲ್ಲಿ ಉದ್ಘಾಟಿಸಲಿದ್ದಾರೆ.mysore-dasara-film-festival-october-10th-inauguration-food-festival

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡರು, ಮಾನ್ಯ ಪ್ರವಾಸೋದ್ಯಮ ರೇಷ್ಮೆ ಇಲಾಖೆ ಸಚಿವರಾದ  ಸಾ. ರಾ. ಮಹೇಶ್‍ರವರು ಹಾಗೂ ಇತರೆ ಸಚಿವರು ಮತ್ತು ಶಾಸಕರು, ಸಂಸದರು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಇತರ ಜನಪ್ರತಿನಿಧಿಗಳು ಭಾಗವಹಿಸುವರು.

ನಿಖಿಲ್ ಕುಮಾರಸ್ವಾಮಿ, ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಪಾರುಲ್ ಯಾದವ್ ಚಲನಚಿತ್ರೋತ್ಸವದ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಡಾ.ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್.ಎ. ಚಿನ್ನೇಗೌಡ, ಚಲನಚಿತ್ರ ಕಲಾವಿದರಾದ ನಿಖಿಲ್ ಕುಮಾರಸ್ವಾಮಿ, ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಪಾರುಲ್ ಯಾದವ್ ಹಾಗೂ ಚಲನಚಿತ್ರ ನಿರ್ದೇಶಕರಾದ ಸತ್ಯ ಪ್ರಕಾಶ್, ರಿಷಬ್ ಶೆಟ್ಟಿ ಆಗಮಿಸಲಿದ್ದಾರೆ.

ಉದ್ಥಾಟನೆಯಲ್ಲಿ ‘ಒಂದಲ್ಲಾ ಎರಡಲ್ಲಾ’ ಚಲನಚಿತ್ರ ಪ್ರದರ್ಶನ

ಚಲನಚಿತ್ರೋತ್ಸವ ಉದ್ಘಾಟನೆ ನಂತರ ಡಿ. ಸತ್ಯಪ್ರಕಾಶ್ ನಿರ್ದೇಶನದ ಮನೋರಂಜಿತ, ಸೈದ್ಧಾಂತಿಕ ನೆಲಗಟ್ಟಿನಲ್ಲಿ ದಿನನಿತ್ಯ ನಡೆಯುವ ಜೀವನ ಶೈಲಿ ಹೊಂದಿರುವ ‘ಒಂದಲ್ಲಾ ಎರಡಲ್ಲಾ’ ಸಿನಿಮ ಕಲಾಮಂದಿರದಲ್ಲಿ ಪ್ರದರ್ಶನವಾಗಲಿದೆ. ಜಾತಿ-ಧರ್ಮಗಳಿಗೂ ಮೀರಿದ ಮಾನವೀಯತೆ ಸಹಬಾಳ್ವೆಯ ಜೀವನವನ್ನು ಸಾರುವ ಚಿತ್ರ ಇದಾಗಿದೆ.

65 ಚಲನಚಿತ್ರಗಳು 72 ಪ್ರದರ್ಶನ :- ಮೈಸೂರು ದಸರಾ ಚಲನಚಿತ್ರೋತ್ಸವದ ವತಿಯಿಂದ ಈ ಬಾರಿ ಐನಾಕ್ಸ್ ಚಿತ್ರಮಂದಿರದಲ್ಲಿ ದಿನಾಂಕ:12-10-2018 ರಿಂದ 17-10-2018ರವರೆಗೆ 65 ಚಲನಚಿತ್ರಗಳು, 72 ಪ್ರದರ್ಶನ ಕಾಣಲಿದೆ. ಪ್ರದರ್ಶನದಲ್ಲಿ ಕನ್ನಡ, ತುಳು, ಕೊಡವ ಹಾಗೂ ಇತರ ಭಾರತೀಯ ಭಾಷೆ ಮತ್ತು ಇತರೆ ಅಂತರಾಷ್ಟ್ರೀಯ ಭಾಷೆಯ ಚಿತ್ರಗಳು ಒಳಗೊಂಡಿವೆ. ಚಲನಚಿತ್ರ ಪ್ರದರ್ಶನದ ನೋಂದಣಿ ಶುಲ್ಕ ರೂ.300/-ಗಳು.

 ಕಿರುಚಿತ್ರ ಚಲನಚಿತ್ರ ಕಾರ್ಯಾಗಾರ

ಮೈಸೂರು ದಸರಾ ಚಲನಚಿತ್ರೋತ್ಸವ ಮತ್ತು ಕರ್ನಾಟಕ ಚಲನಚಿತ್ರ ಆಕಾಡೆಮಿ ವತಿಯಿಂದ 13-10-2018 ಮತ್ತು 14-10-2018ರ ಎರಡು ದಿನಗಳ ಕಾರ್ಯಗಾರವನ್ನು ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಕಿರುಚಿತ್ರ ತಯಾರಿಕೆ, ನಿರ್ಮಾಣ, ನಿರ್ದೇಶನ ಕುರಿತು ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಶುಲ್ಕ ರೂ.400/- ಹಾಗೂ ವಿದ್ಯಾರ್ಥಿಗಳಿಗೆ ಶುಲ್ಕ ರೂ.300/-ಗಳು. ಕಾರ್ಯಾಗಾರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳಿಗೆ ದಸರಾ ಚಲನಚಿತ್ರ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.

ಕಿರುಚಿತ್ರ ಚಲನಚಿತ್ರ ಸ್ಪರ್ಧೆ

ಮೈಸೂರು ದಸರಾ ಚಲನಚಿತ್ರೋತ್ಸವ ಮತ್ತು ಕರ್ನಾಟಕ ಚಲನಚಿತ್ರ ಆಕಾಡೆಮಿ ವತಿಯಿಂದ ಈ ಬಾರಿ ಕಿರುಚಿತ್ರ ಚಲನಚಿತ್ರ ಸ್ಪರ್ಧೆಗೆ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದೆ. ಸ್ಪರ್ಧೆಗೆ ದಿನಾಂಕ:12-10-2018 ಸಂಜೆ 6.00ರವರೆಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.

ನಾಳೆಯಿಂದ ಪ್ರಾರಂಭವಾಗಲಿದೆ ಆಹಾರ ಮೇಳ…

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ್ ಮಹಲ್ ಪ್ಯಾಲೆಸ್ ಹೋಟೆಲ್ ಬಳಿಯ ಮುಡಾ ಮೈದಾನದಲ್ಲಿ ಜನಪ್ರಿಯ ದಸರಾ ಆಹಾರ ಮೇಳ ನಡೆಯಲಿದ್ದು, ನಾಳೆ ಮಧ್ಯಾಹ್ನ 2 ಗಂಟೆಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ಖಾನ್  ಉದ್ಘಾಟನೆ ಮಾಡಲಿದ್ದಾರೆ.mysore-dasara-film-festival-october-10th-inauguration-food-festival

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ  98 ಮಳಿಗೆಗಳ ನಿರ್ಮಾಣ ಲಿತ್ ಮಹಲ್ ಪ್ಯಾಲೆಸ್ ಹೋಟೆಲ್ ಬಳಿಯ ಮುಡಾ ಮೈದಾನದಲ್ಲಿ 75 ಮಳಿಗೆಗಳ ನಿರ್ಮಾಣ ಮಾಡಲಾಗಿದೆ. ಬುಡಕಟ್ಟು ಜನಾಂಗದ ಆಹಾರ ಪದ್ದತಿ, ವಿವಿಧ ರಾಜ್ಯಗಳು ಹಾಗೂ ವಿದೇಶಿ ಆಹಾರ ಪದ್ದತಿಯನ್ನ ಆಹಾರ ಮೇಳ ಒಳಗೊಂಡಿದೆ.

ಬಂಬೂ ಬಿರಿಯಾನಿ, ಬಿದಿರಕ್ಕಿ ಪಾಯಸ, ಬಿದಿರು-ಕಳಲೆ ಸಾರು, ನಳ್ಳಿ ಸಾರು ಸೇರಿದಂತೆ ಆದಿವಾಸಿ ಬುಡಕಟ್ಟು ಸಮುದಾಯದ ತಿನಿಸುಗಳನ್ನು ಕಳೆದ ಬಾರಿ ಪರಿಚಯಿಸಲಾಗಿತ್ತು.. ಈ ಬಾರಿ ಚೀನಾ, ಶ್ರೀಲಂಕಾ, ಬಾಂಗ್ಲಾದೇಶ, ಟಿಬೆಟ್‌, ದಕ್ಷಿಣ ಆಫ್ರಿಕಾ, ಕಾಂಬೋಡಿಯಾ ದೇಶಗಳ ತಿನಿಸುಗಳನ್ನೂ ಪರಿಚಯಿಸಲು ಕ್ರಮ ಕೈಗೊಳ್ಳಲಾಗಿದೆ.

ದಸರಾ ಸಂದರ್ಭದಲ್ಲಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿಶೇಷ ನಳಪಾಕ ಸ್ಪರ್ಧೆಗಳು ನಡೆಯಲಿವೆ….

ಅ.11 ರಂದು ಅತ್ತೆ ಸೊಸೆ ವಿಭಾಗದಿಂದ ಅಕ್ಕಿರೊಟ್ಟಿ ಮತ್ತು ಬದನೆಕಾಯಿ ಎಣ್ಣೆಗಾಯಿ ತಯಾರಿಕೆ, ಅ.12ಕ್ಕೆ ಗಂಡ-ಹೆಂಡತಿ ವಿಭಾಗದಿಂದ ರಾಗಿರೊಟ್ಟಿ ಮತ್ತು ಹುಚ್ಚೆಳ್ ಚಟ್ನಿ….

ಅ.13ಕ್ಕೆ ಯುವಕರ ವಿಭಾಗದಿಂದ ವೆಜ್ ಫ್ರೈಡ್ ರೈಸ್‌ ಮತ್ತು ಸಲಾಡ್, ಅ.14ಕ್ಕೆ ಯುವತಿಯರ ವಿಭಾಗದಿಂದ ಗೀರೈಸ್ ಮತ್ತು ವೆಜ್ ಕುರ್ಮಾ,…

ಅ.15ಕ್ಕೆ ಹಿರಿಯ ಪುರುಷ ಹಾಗೂ ಮಹಿಳೆಯರ ವಿಭಾಗದಿಂದ ಸಿರಿಧಾನ್ಯ ಅಡುಗೆ,

ಅ.16ಕ್ಕೆ ಮಹಿಳಾ ಸಂಘ ಅಥವಾ ಸ್ತ್ರೀಶಕ್ತಿ ಸಂಘದ ಸದಸ್ಯರಿಂದ ಕಾಯಿ ಹೊಳಿಗೆ, ವೆಜ್ ಪಕೋಡ ಹಾಗೂ ರೈಸ್‌ ಪಲಾವ್‌ ತಯಾರಿಕೆ.

ಅ.17 ಕೊನೆಯ ದಿನದಂದು ಹೋಟೆಲ್‌, ಕೆಟರರ್ಸ್ ಹಾಗೂ ಗೃಹ ಕುಟುಂಬದವರಿಂದ ಒತ್ತು ಶಾವಿಗೆ, ನಾಟಿ ಕೋಳಿ ಸಾರು ಹಾಗು ಗಸಗಸೆ ಪಾಯಸ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ನಳಪಾಕ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಗ್ಯಾಸ್‌ ಸ್ಟೌವ್ ಮತ್ತು ಅಡುಗೆ ಅನಿಲವನ್ನು ಆಯೋಜಕರೇ ವಿತರಿಸಲಿದ್ದಾರೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಎಂ.ಶಿವಣ್ಣ ಮಾಹಿತಿ ನೀಡಿದರು.

key words: Mysore Dasara- Film Festival -October 10th-Inauguration – food festival

The post ಮೈಸೂರು ದಸರಾ: ನಾಳೆಯಿಂದ ಚಲನಚಿತ್ರೋತ್ಸವ: ಆಹಾರ ಮೇಳ ಉದ್ಘಾಟನೆ… appeared first on Just Kannada - Online Kannada News.


Viewing all articles
Browse latest Browse all 41702

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶಾಕಿಂಗ್ ನ್ಯೂಸ್: ಶಾಲೆಯಲ್ಲೇ ಸೆಕ್ಸ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>