ಮೈಸೂರು,ಅ,10,2018(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದ್ದು ಮೈಸೂರು ಅರಮನೆ ಹಾಲ್ ನಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರ್ ಆರಂಭವಾಗಿದೆ.
ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್ ಅ.10ರಿಂದ 19ರವರೆಗೂ 9 ದಿನಗಳ ಕಾಲ ನಡೆಯಲಿದೆ. ಮೈಸೂರು ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಎಲ್ಲರ ಗಮನ ಸೆಳೆಯುತ್ತಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆವರೆಗೆ ಯದುವೀರ್ ಅವರ ಖಾಸಗಿ ದರ್ಬಾರ್ ನಡೆಯಲಿದೆ.
ರಾಜವಂಶಸ್ಥ ಯದುವೀರ್ ಅವರು ಸಾಂಪ್ರದಾಯಿಕವಾಗಿ ಪೂಜಾಕೈಂಕರ್ಯಗಳನ್ನ ನೆರವೇರಿಸಿ ರತ್ನಖಚಿತ ಸಿಂಹಾಸನರೋಢರಾಗಿ ಖಾಸಗಿ ದರ್ಬಾರ್ ಆರಂಭಿಸಿದರು. ಮೊದಲು ಕಳಶಪೂಜೆ ನೆರವೇರಿಸಿದ ಯದುವೀರ್ ನಂತರ ಕಂಕಣಧಾರಣೆ ಮಾಡಿ ಬಳಿಕ ಪೂಜೆ ಸಲ್ಲಿಸಿ ಸಿಂಹಾಸನರೂಢರಾದರು. ರಾಜಪೋಷಾಕಿನಿಂದ ಯದುವೀರ್ ಕಂಗೊಳಿಸುತ್ತಿದ್ದು, ನಾಲ್ಕನೇ ಬಾರಿಗೆ ಸಿಂಹಾಸನಾರೋಹಣ ಮಾಡಿದ್ದಾರೆ.
ಇನ್ನು ಚಾಮುಂಡಿ ಸನ್ನಿದಾನದಲ್ಲಿ ಮೈಸೂರು ದಸರಾಗೆ ಚಾಲನೆ ಕೊಟ್ಟ ಇನ್ಫೋಸಿಸ್ ಅಧ್ಯಕ್ಷೆ ಡಾ.ಸುಧಾನಾರಾಯಣ್ ಮೂರ್ತಿ ಅವರು ಅರಮನೆಯಲ್ಲಿನ ಖಾಸಗಿ ದರ್ಬಾರ್ ವೀಕ್ಷಿಸಿದರು.
Key words: Mysore Palace- Private Darbar – Dynasty-yaduveer
The post ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ರಿಂದ ಖಾಸಗಿ ದರ್ಬಾರ್… appeared first on Just Kannada - Online Kannada News.