ಮೈಸೂರು,ಅ,10,2018(www.justkannada.in): ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು ಹಾಗೂ ಚಿತ್ರ ಕಲಾವಿದರನ್ನು ಸನ್ಮಾನಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2018 ಹಿನ್ನೆಲೆ, ಕಲಾಮಂದಿರದಲ್ಲಿ ದೀಪ ಬೆಳಗುವ ಮೂಲಕ ದಸರಾ ಚಲನಚಿತ್ರೋತ್ಸವಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದರು. ಇಂದಿನಿಂದ 17ನೇ ತಾರೀಖಿನವರೆಗೂ ದಸರಾ ಚಲನಚಿತ್ರೋತ್ಸವ ನಡೆಯಲಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಸ್ಯಾಂಡಲ್ವುಡ್ ಸ್ಟಾರ್ಸ್ ಗೆ ಸನ್ಮಾನ….
ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸ್ಯಾಂಡಲ್ ವುಡ್ ನ ಹಲವು ಸ್ಟಾರ್ಸ್ ಗಳಿಗೆ ಸನ್ಮಾನ ಮಾಡಿದರು.
ವಿಜಯ್ ರಾಘವೇಂದ್ರ, ರಿಷಬ್ ಶೇಟ್ಟಿ, ಫಿಲಂ ಚೇಂಬರ್ ಅಧ್ಯಕ್ಷರಾದ ಚನ್ನೆಗೌಡ, ತಿಥಿಖ್ಯಾತಿಯ ಗಡ್ಡಪ್ಪ ಮತ್ತು ಸೆಂಚುರಿಗೌಡ, ನಿರ್ದೇಶಕ ಸತ್ಯ ಪ್ರಕಾಶ್ ನಟಿ ಪಾರುಲ್ ಯಾದವ್, ಹರ್ಷಿಕ ಪೂಣಚ್ಚ, ನಾಗತಿಹಳ್ಳಿ ಚಂದ್ರ ಶೇಕರ್ ಅವರಿಗೆ ಸನ್ಮಾನ ಮಾಡಲಾಯಿತು.
Key words: Drive – Mysore Dasara- Film Festival-Honored -Sandalwood Stars.
The post ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ: ಸ್ಯಾಂಡಲ್ ವುಡ್ ಸ್ಟಾರ್ಸ್ ಗೆ ಸನ್ಮಾನ…. appeared first on Just Kannada - Online Kannada News.