ಬೆಂಗಳೂರು,ಅ,10,2018(www.justkannada.in): ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ದಿ ವಿಲನ್ ಚಿತ್ರ ಬಿಗ್ ಬಜೆಟ್ ಸಿನಿಮಾ. ಚಿತ್ರದ ಬಗ್ಗೆ ಇರುವ ನಿರೀಕ್ಷೆ ಕೂಡ ಬಿಗ್! ಅದನ್ನೇ ಕ್ಯಾಶ್ ಮಾಡಲು ಹೊರಟಿರುವ ಚಿತ್ರತಂಡ ಚಿತ್ರಮಂದಿರಗಳ ಪ್ರವೇಶ ದರವನ್ನೂ ಇದ್ದಕ್ಕಿದ್ದಂತೆ ಏರಿಸಿದೆ.
ಅಕ್ಟೋಬರ್ 18 ರಂದು ತೆರೆಕಾಣಲಿರುವ ಈ ಸಿನಿಮಾಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬಾಲ್ಕನಿಯ ದರ 50 ರೂಪಾಯಿ ಮತ್ತು ಸೆಕೆಂಡ್ ಕ್ಲಾಸ್ ದರ 18 ರೂಪಾಯಿ ಏರಿಕೆ ಕಂಡಿದೆ.
ಈ ಏರಿಕೆಯಿಂದಾಗಿ ಬಾಲ್ಕನಿ ಪ್ರೇಕ್ಷಕರು 200 ರೂಪಾಯಿ, ಸೆಕೆಂಡ್ ಕ್ಲಾಸ್‌ಗೆ ಹೋಗುವವರು 118 ರೂಪಾಯಿ ಕೊಟ್ಟು ಸಿನಿಮಾ ನೋಡಬೇಕು! ಮಲ್ಟಿಪ್ಲೆಕ್ಸ್‌ಗಳಲ್ಲಿ ಬುಕಿಂಗ್ ಇನ್ನೂ ಆರಂಭವಾಗಿಲ್ಲ. ಆದರೆ ಈಗಿರುವ ಸುದ್ದಿಯ ಪ್ರಕಾರ ಮಲ್ಟಿಪ್ಲೆಕ್ಸ್ ಟಿಕೆಟ್ ದರ 400 ರುಪಾಯಿ ನಿಗದಿ ಆಗಲಿದೆ. ಇದಕ್ಕೆ ಪ್ರೇಕ್ಷಕರಿಗೆ ವಿರೋಧವೂ ವ್ಯಕ್ತವಾಗಿದೆ.
‘ಕನ್ನಡ ಸಿನಿಮಾಗಳ ಮಾರುಕಟ್ಟೆ ಮೊದಲೇ ಸೀಮಿತ. ಪರಭಾಷಾ ಚಿತ್ರಗಳಿಗೆ ಕನ್ನಡಿಗರೇ ಹೆಚ್ಚುವರಿ ದುಡ್ಡು ಕೊಟ್ಟು ಸಿನಿಮಾ ನೋಡುವುದು ಹೊಸತೇನಲ್ಲ. ಅದಕ್ಕೆ ಹೋಲಿಸಿದರೆ, ಇದೊಂದು ಹೆಚ್ಚಳವೇ ಅಲ್ಲ. ಅದ್ಧೂರಿ ವೆಚ್ಚದಲ್ಲಿ ಸಿನಿಮಾ ಮಾಡಿದಾಗ ಅದನ್ನು ವಾಪಸ್ ಪಡೆಯುವುದು ಹೇಗೆ ಅನ್ನೋದು ನಿರ್ಮಾಪಕರ ಆತಂಕ. ಹಾಗಾಗಿ ಪ್ರೇಕ್ಷಕರಿಗೆ ಹೊರೆಯಾಗದಂತೆ ಒಂದಷ್ಟು ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯ’ ಎನ್ನುತ್ತಾರೆ ವಿತರಕರು.
The post ದಿ ವಿಲನ್ ಟಿಕೆಟ್ ದರ ಎಷ್ಟು ಗೊತ್ತೆ…? appeared first on Just Kannada - Online Kannada News.