ಮೈಸೂರು,ಅ,9,2018(www.justkannada.in): ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಮೈಸೂರಿನಿಂದ ಹೆಗ್ಗಡದೇವನಕೋಟೆಗೆ ತೆರಳುವ ರಿಂಗ್ ರಸ್ತೆಯಲ್ಲಿಂದು ಮಧ್ಯಾಹ್ನ ನಡೆದಿದೆ.
ನಂಜನಗೂಡಿನಿಂದ ಬಂದು ಹೆಗ್ಗಡದೇವನ ಕೋಟೆಯ ಕಡೆ ತೆರಳುತ್ತಿದ್ದ ಟಾಟಾ ಏಸ್ ವಾಹನವು ಟರ್ನ್ ಆಗುತ್ತಿದ್ದ ವೇಳೆ ಹೆಗ್ಗಡದೇವನಕೋಟೆ ಕಡೆಯಿಂದ ಬಂದ ಟಾಟಾ ವಿಂಗರ್ ಪ್ಯಾಸೆಂಜರ್ ವಾಹನ ಗುದ್ದಿದೆ. ಇದೇ ವೇಳೆ ಹೆಚ್.ಡಿ ಕೋಟೆ ಕಡೆಯಿಂದ ಬಂದ ಸ್ವಿಫ್ಟ್ ಕಾರು ಟಾಟಾ ವಿಂಗರ್ ವಾಹನಕ್ಕೆ ಗುದ್ದಿದೆ. ಅಪಘಾತದಲ್ಲಿ ವಾಹನಗಳು ಡ್ಯಾಮೇಜ್ ಆಗಿವೆ. ಪ್ಯಾಸೆಂಜರ್ ವಾಹನದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳಕ್ಕೆ ವಿದ್ಯಾರಣ್ಯಪುರಂ ಮತ್ತು ಕೆ.ಆರ್.ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.
key words: accident- occurred- between- three vehicles -Mysore.
The post ಮೈಸೂರಿನಲ್ಲಿ ವಾಹನಗಳ ನಡುವೆ ಸರಣಿ ಅಪಘಾತ… appeared first on Just Kannada - Online Kannada News.