ಮೈಸೂರು,ಅ,10,2018(www.justkannada.in): ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಕ್ಕಿದೆ. ಈ ಮಧ್ಯೆ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಖಾಸಗಿ ದರ್ಬಾರ್ ಗೆ ಪಟ್ಟದ ಆನೆಗಳು ಸನ್ನದ್ಧವಾಗಿವೆ.
ಪಟ್ಟದ ಆನೆ ಗೋಪಿ, ವಿಕ್ರಮ ಪ್ರೀತಿ, ಚಂಚಲ್, ರೂಬಿ, ಸೀತಾ ಆನೆಗಳು ಸಜ್ಜಾಗಿವೆ, ಅರಮನೆಯ ಒಡೆಯರ್ ನಿವಾಸದ ಸಿದ್ದತೆ ನಡೆಸುತ್ತಿದ್ದು ಆನೆಗಳಿಗೆ ಬಣ್ಣ ಬಳಿದು ಸಿಂಗರಿಸಲಾಗುತ್ತಿದೆ.
ಇನ್ನು ಮೈಸೂರು ಅರಮನೆಯಲ್ಲಿ ನವರಾತ್ರಿ ಉತ್ಸವ ಪೂಜಾ ವಿಧಿ ಪ್ರಾರಂಭವಾಗಿದ್ದು, ರಾಜವಂಶಸ್ಥ ಯದುವೀರ್ ಗೆ ಅಭ್ಯಂಜನ ಸ್ನಾನ ಮಾಡಲಾಯಿತು. ಅರಮನೆ ಅವರಣದ ಚಾಮುಂಡಿ ತೊಟ್ಟಿಯಲ್ಲಿ ಧಾರ್ಮಿಕ ಕಾರ್ಯ ನಡೆಯುತ್ತಿದ್ದು, ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ದಂಪತಿಗೆ ಕಂಕಣ ಧಾರಣೆ ಮಾಡಿದ್ದಾರೆ.
10 ಗಂಟೆಗೆ ಸವಾರಿ ತೊಟ್ಟಿಯಲ್ಲಿ ಪಟ್ಟದ ಅನೆಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, 12ರಿಂದ 12.35 ಒಳಗೆ ಶುಭ ಲಗ್ನ ದಲ್ಲಿ ರಾಜವಂಶಸ್ಥ ಯದುವೀರ್ ಅವರು ಸಿಂಹಾಸನರೋಹಣ ಮಾಡಲಿದ್ದಾರೆ. ಖಾಸಗಿ ದರ್ಬಾರ್ ಹಿನ್ನೆಲೆ ಯದುವೀರ್ ಅವರು ಕಳಶಪೂಜೆ ನೆರವೇರಿಸಿದರು. ಬಳಿಕ ಕಂಕಣ ಪೂಜೆ ಸಲ್ಲಿಸಿದರು. ಯದುವೀರ್ ಅವರು ರತ್ನಖಚಿತ ರಾಜ ಪೋಷಾಕಿನಲ್ಲಿ ಕಂಗೊಳಿಸುತ್ತಿದ್ದಾರೆ.
Key words: Prepared -elephants –Darbar- From -royal family -Yaduweer ..
The post ಖಾಸಗಿ ದರ್ಬಾರ್ ಗೆ ಪಟ್ಟದ ಆನೆಗಳು ಸನ್ನದ್ಧ: ರಾಜವಂಶಸ್ಥ ಯದುವೀರ್ ರಿಂದ ಕಳಶಪೂಜೆ, ಕಂಕಣ ಧಾರಣೆ. appeared first on Just Kannada - Online Kannada News.