ಹುಬ್ಬಳ್ಳಿ,ಅ,10,2018(www.justkannada.in): ಯುವಕನನ್ನ ಮನೆಯಿಂದ ಕರೆದುಕೊಂಡು ಹೋದ ದುಷ್ಕರ್ಮಿಗಳು ಆತನ ಮೇಲೆ ಬ್ಯಾಟ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ರೇವಡ್ಯಾಳ ಕ್ರಾಸ್ ಬಳಿ ನಡೆದಿದೆ.
ಸಂಜೀವಕುಮಾರ ಬೆಂಗೇರಿ (20) ಕೊಲೆಯಾದ ವ್ಯಕ್ತಿ. ಈತ ಗೋಕುಲ ಗ್ರಾಮದ ನಿವಾಸಿಯಾಗಿದ್ದು, ಮನೆಯಲ್ಲಿದ್ದ ವೇಳೆ ದುಷ್ಕರ್ಮಿಗಳು ಈತನನ್ನ ಕರೆದೊಯ್ದು ನಗರದ ರೇವಡ್ಯಾಳ ಕ್ರಾಸ್ ಬಳಿ ಬ್ಯಾಟ್ ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: murder- carried -house -killed – young man
The post ಮನೆಯಿಂದ ಕರೆದೊಯ್ದು ಯುವಕನನ್ನ ಹತ್ಯೆಗೈದ ದುಷ್ಕರ್ಮಿಗಳು… appeared first on Just Kannada - Online Kannada News.